ಜೈ ಭೀಮ್ ಸಂಘರ್ಷ ಸಮಿತಿಯ ನೂತನ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾಗಿ ರಘುವೀರ್ ಸಿದ್ದಿ ಆಯ್ಕೆ-ಶಾಖೆ ಉದ್ಘಾಟನಾ ಕಾರ್ಯಕ್ರಮ-Jai Bhim Sangarsha Samiti
ಜೈ ಭೀಮ್ ಸಂಘರ್ಷ ಸಮಿತಿಯ ಧಾರವಾಡ ತಾಲೂಕು ಶಾಖೆ ಉದ್ಘಾಟನಾ ಕಾರ್ಯಕ್ರಮ ಹಲವಾರು ಸಮಾಜ ಸೇವೆಗಳನ್ನ ಮಾಡುತ್ತಾ ಬರುತ್ತಿರುವ ರಾಜ್ಯದ ಪ್ರತಿಷ್ಠಿತ ಸಂಘಟನೆಯಾದ "ಜೈ ಭೀಮ್ ಸಂಘರ್ಷ ಸಮಿತಿ (ರಿ)" ಇಂದು ಧಾರವಾಡ ತಾಲೂಕಾ ಶಾಖೆ ಉದ್ಘಾಟನಾ ಕಾರ್ಯಕ್ರಮವನ್ನು ನಗರದ ಸಾಧನಕೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ನೂತನ ಧಾರವಾಡ ಜಿಲ್ಲಾ ಉಪಾಧ್ಯಕ್ಷ, ಗೌರವ ಅಧ್ಯಕ್ಷ, ತಾಲೂಕ ಅಧ್ಯಕ್ಷ,ತಾಲೂಕ ಕಲಾವಿದರ ಅಧ್ಯಕ್ಷ,ನಗರ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಧಾರವಾಡ ಜಿಲ್ಲಾ ಉಪಾಧ್ಯಕ್ಷರಾಗಿ ರಘುವೀರ್ ಸಿದ್ದಿ,ಜಿಲ್ಲಾ ಗೌರವ ಅಧ್ಯಕ್ಷರಾಗಿ ಪರಶುರಾಮ ಭಜಂತ್ರಿ,ಧಾರವಾಡ ತಾಲೂಕಾ ಅಧ್ಯಕ್ಷರಾಗಿ ಹರ್ಷಾ ಹೊಸಮನಿ, ಧಾರವಾಡ ತಾಲೂಕಾ ಅಧ್ಯಕ್ಷರಾಗಿ (ಕಲಾವಿದರ) ಶಿವರಾಜ್ ಮಾದರ ಮತ್ತು ನಗರ ವಾರ್ಡ ನಂ.18 ಅಧ್ಯಕ್ಷರಾಗಿ ಮಂಜುನಾಥ ಪಾಟೀಲ್ ರವರನ್ನು ಆಯ್ಕೆ ಮಾಡಿ ,ಆದೇಶ ಪ್ರತಿಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಸಂತಕುಮಾರ್ ಅನಂತಪುರ ರವರು, ಬಾಬಾ ಸಹೇಬ್ ಅಂಬೇಡ್ಕರ್ ರವರ ಜೀವನ ಚರಿತ್ರೆ ಬಗ್ಗೆ ಮತ್ತು ಸಂಘಟನೆ ಯಾಕೇ ಮಾಡಬೇಕು, ಸಂಘಟನೆಯ ಉದ್ದೇಶಗಳನ್ನು ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ಮಾಹಿತಿ ನೀಡಿದರು. ಸಂಘಟನೆಯ ಕೋರ್ ಕಮಿಟಿಯ ಅಧ್ಯಕ್ಷರಾದ ಬಸವರಾಜ ಕಬಡ್ಡಿರವರು ಮಾತನಾಡಿ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣು ಇರುತ್ತ...






