ಕಬಡ್ಡಿ ಸ್ನೇಹಲೋಕ ನೇತೃತ್ವದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಪೂರ್ವಭಾವಿ ಸಭೆ-Siddi Suddi

 ನರಗುಂದ:

ಕಬಡ್ಡಿ ಸ್ನೇಹಲೋಕ ನೇತೃತ್ವದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಪೂರ್ವಭಾವಿ ಸಭೆ


ಉತ್ತರ ಕರ್ನಾಟಕದ ಕ್ರೀಡಾಪಟುಗಳಿಗೆ ಹಾಗೂ ನಿರ್ಣಾಯಕರಿಗೆ ಅವಕಾಶಗಳು ಇತ್ತೀಚಿನ ದಿನಗಳಲ್ಲಿ ಸಿಗುತ್ತಿಲ್ಲ.ಅದಕ್ಕಾಗಿ ಉತ್ತರ ಕರ್ನಾಟಕದ ಕ್ರೀಡಾಪಟುಗಳಿಗೆ ಮತ್ತು ನಿರ್ಣಾಯಕರಿಗೆ ಹೆಚ್ಚಿನ ಅವಕಾಶಗಳು ಮುಂದಿನ ದಿನಗಳಲ್ಲಿ ದೊರೆಯಬೇಕು ಎಂದು ನರಗುಂದದಲ್ಲಿ ಕಬಡ್ಡಿ ಸ್ನೇಹಲೋಕ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.


ಉತ್ತರ ಕರ್ನಾಟಕದಲ್ಲಿ "ಕಬಡ್ಡಿ ಸ್ನೇಹಲೋಕ ಕಪ್" ಕಬಡ್ಡಿ ಯೋಜನೆ

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಿಂದ ಕಬಡ್ಡಿ ತಂಡಗಳು ರಚನೆಯಾಗಬೇಕು ಮತ್ತು ಆ ತಂಡಗಳಿಗೆ ವೇದಿಕೆಯನ್ನು ಒದಗಿಸಬೇಕು‌ ಹಾಗೂ ವಿಜೇತ ತಂಡಕ್ಕೆ ನಗದು ಬಹುಮಾನ ಮತ್ತು ವರ್ಷದ ಸಾಧಕ ಎಂದು ಪುರಸ್ಕಾರ ಮಾಡಲಾಗುವುದು ಎಂದು ಕಬಡ್ಡಿ ಸ್ನೇಹಲೋಕ ತಂಡ ಈ ಯೋಜನೆಯನ್ನು ಕೈಗೊಂಡಿದೆ.
ಹಾಗೂ ಇದು ಯಾವುದೇ ಕಬಡ್ಡಿ ಸಂಸ್ಥೆಯ ವಿರುದ್ದ ಅಲ್ಲಾ ಎಂದು ತಿಳಿಸಿದ್ದಾರೆ.

ಈ ಸಭೆಯಲ್ಲಿ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಕ್ರೀಡಾಪಟುಗಳು ಭಾಗವಹಿಸಿದ್ದರು.


                                                                ಕಬಡ್ಡಿ ಬಸವರಾಜ್ (ಸಿದ್ದಿ-ಸುದ್ದಿ ವರದಿಗಾರರು, ಹುಬ್ಬಳ್ಳಿ)



Comments