ಕಂಪ್ಲಿ (ದಾರಿ ತಪ್ಪಿದ ಮೇಲೆ)ಹಾಗಾದರೆ ನಮ್ಮ ಮುಂದಿನ ಗುರಿ ಎನು..?-Siddi Suddi
ಕಂಪ್ಲಿ (ದಾರಿ ತಪ್ಪಿದ ಮೇಲೆ)
ಐತಿಹಾಸಿಕ ನಗರ, ಶ್ರೇಷ್ಠವಾದ ಇತಿಹಾಸವನ್ನು ಒಡಲೊಳಗೇ ಇಟ್ಟುಕೊಂಡು ಗತಕಾಲದಲ್ಲಿ ಮೆರೆದಂತಹ ಚಿಕ್ಕ ಪ್ರಾಂತ್ಯ.ಕ್ರಿ.ಶಕ 9ನೇ ಶತಮಾನದಲ್ಲಿ ಶ್ರೀ ಸೋಮೇಶ್ವರ ದೇವಾಲಯ ನಿರ್ಮಾಣವಾಗಿರಬಹುದು.
13 ನೇ ಶತಮಾನದಲ್ಲಿ ಕಮ್ಮಟದುರ್ಗ ಎಂಬ ಹೆಸರಿನಿಂದ ಕಂಪಲಿರಾಯನ ಆಳ್ವಿಕೆಯಲ್ಲಿತ್ತು.
ದ್ವಾರಸಮುದ್ರ ಏಂದು ಮತ್ತೊಂದು ಹೆಸರು ಕಂಪ್ಲಿಗೇ ಇತಿಹಾಸ ಪುಟಗಳಲ್ಲಿ ಉಲ್ಲೇಖಿಸಲಾಗಿದೇ.
ಕಂಪಲಿರಾಯರ ಪುತ್ರ ಶ್ರೀ ಗಂಡುಗಲಿ ಕುಮಾರರಾಮರ ವರ್ಣನೆ 15 ನೇ ಶತಮಾನದಲ್ಲಿ ಕವಿ ನಂಜುಂಡ ರವರ "ರಾಮನಾಥಚರಿತೆ" ಎಂಬ ಗ್ರಂಥದಲ್ಲಿ ಉಲ್ಲೇಖಿಸಲಾಗಿದೇ.
"ಪರನಾರಿ ಸಹೋದರ" ಎಂದು ಬಿರುದಾಂಕಿತನಾಗಿದ್ದ...
ಗಂಡುಗಲಿ ಕುಮಾರರಾಮರ ಸಾಹಸ ಕಥೆಗಳು ಇಂದಿಗೂ ಪ್ರಸ್ತುತ.... ದೆಹಲಿಯ ತುಘಲಕ್ ಸೈನ್ಯ ಸೋಲಿಸಿದ ಪರಾಕ್ರಮಶಾಲಿ....ದೆಹಲಿ ಸುಲ್ತಾನರು ತಮ್ಮ ಪುತ್ರಿಯನ್ನು ಕುಮಾರರಾಮರಿಗೆ ಮದುವೆ ಮಾಡಿಕೊಡಲು ಬಂದಾಗ ನಿರಾಕರಿಸಿದ ವೀರ...
ತನ್ನ ತಾಯಿ ಹರಿಯಾಲಧೇವಿಗೇ ವಚನ ಕೊಟ್ಟು ತನ್ನ ಕೊನೆ ಹುಸಿರು ಇರುವ ತನಕ ಪರನಾರಿ ಸಹೋದರ ರಾಗಿ ಉಳಿದ ನಮ್ಮ ಚೆಲುವ ಕುಮಾರರಾಮ.
ಇಂತಹ ಇತಿಹಾಸವಿರುವ ಕಂಪ್ಲಿ ಯ ಯಾವೊಂದು ರಸ್ತೆ, ವೃತ್ತಕ್ಕೇ ಗಂಡುಗಲಿ ಕುಮಾರರಾಮರ ಹೆಸರಿಲ್ಲ....ಇದು ವಾಸ್ತವ....(ನಮ್ಮ ಮನೆ ಮಗನಿಗೆ ನಾವು ಕೂಡುವ ಗೌರವ)
ಕ್ರಿ ಶಕ 1950 ರ ಸುಮಾರಿಗೆ ಕಂಪ್ಲಿ ಓಂದು ಕೈಗಾರಿಕಾ ನಗರಿ....ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿತ್ತು.ಸುತ್ತ ಮುತ್ತಲಿನ ಸುಮಾರು ಹಳ್ಳಿಗಳಿಗೆ ಆರ್ಥಿಕ ಅಧಾರವಾಗಿ, ರೈತರ ಆಶಾಕೀರಣವಾಗಿ ಸುಮಾರು 3-4 ದಶಕಗಳ ಕಾಲ ಕಾರ್ಯನಿರ್ವಹಿಸಿತ್ತು.
1970-80 ಮತ್ತು 90ರಲ್ಲಾದ ಕೃಷಿಕ್ರಾಂತಿ ಮತ್ತು ಮಾತೆ ತುಂಗೆಭದ್ರೆಯ ಆಶೀರ್ವಾದ ಭತ್ತದ ಕಣಜವಾಗಿ ಮಾರ್ಪಟ್ಟಿತು ಸರಿಸುಮಾರು 20-30 ಅತ್ಯಾಧುನಿಕ ರೈಸ್ ಮಿಲ್ ಗಳು ಹಾಗೂ ಅದಕ್ಕೆ ತೆರನಾದ ರಾಜ್ಯದಂತ ಮಾರುಕಟ್ಟೆ....
ಶಿಕ್ಷಣವೇ ಶಕ್ತಿ ಎಂಬ ಘೋಷ ವಾಕ್ಯ ಮರೆತು ಉದ್ಯೋಗ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಕಂಡು ಕೊಳ್ಳಲು ಹರಸಾಹಸಪಡುತ್ತಿದೆ.
ವೈದ್ಯಕೀಯ, ತಾಂತ್ರಿಕ,ವ್ಯವಸ್ಥಾಪಕ ಶಿಕ್ಷಣದಲ್ಲಿ ಪ್ರಸ್ತುತ ಶಿಕ್ಷಣ ಪ್ರಪಂಚದಲ್ಲಿ ಕೊನೇಯ ಸರದಿಯಲ್ಲಿ ನಿಂತಿದೆ.ಶಿಕ್ಷಣ ಸಂಸ್ಥೆಗಳ ಕೊರತೆ ಮತ್ತು ಜನರಿಗೆ ಶಿಕ್ಷಣದ ಬಗ್ಗೆ ಕಾಳಜಿ ತೋರಿಸುತ್ತದೆ.
ಹಾಗಾದರೆ ನಮ್ಮ ಮುಂದಿನ ಗುರಿ ಎನು?







Comments
Post a Comment