ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತಿದೆ-Siddi Suddi

 ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತಿದೆ



ನಿಮ್ಮ ವಾರ್ಡ್ ಗಳಲ್ಲಿ ನಿಮ್ಮ ಮಾಜಿ ಸದಸ್ಯರು ಮತ್ತೆ ಮತ ಕೇಳಲು ಬರಬಹುದು ಅವರಿಗೆ ನಿಮ್ಮ ಪ್ರಶ್ನೆ ಹೀಗಿರಲಿ. 


( 1 ) ಕಳೆದ 5 ವರ್ಷದ ನಿಮ್ಮ ವಾರ್ಡಿಗೆ ಬಂದ ಅನುಧಾನ ಎಷ್ಟು? 


( 2 ) ನಿಮ್ಮ ವಾರ್ಡಿನಲ್ಲಿ ನೀವು ಮಾಡಿದ ಕೆಲಸಗಳೇನು?


( 3 )ನಿಮ್ಮ ವಾರ್ಡಿಗೆ ಬಂದ ಮನೆಗಳು ಎಷ್ಟು?


( 4 )ಯಾವ ಫಲಾನುಭವಿಗಳಿಗೆ ಮನೆ ಹಾಕಿದ್ದಿರಿ?


( 5 ) ಫಲಾನುಭವಿಗಳ ಕಡೆಯಿಂದ ಎಷ್ಟು ದುಡ್ಡು ಪಡೆದುಕೊಂಡಿದ್ದಿರಿ?


( 6 ) ಗ್ರಾಮಕ್ಕಾಗಿ ಯಾವ ಯೋಜನೆಗಳನ್ನು ತಂದಿದ್ದಿರಿ?


( 7 ) ಗ್ರಾಮದ ಉದ್ದಾರಕ್ಕಾಗಿ ನೀವು ಮಾಡಿದ ಕಾರ್ಯಗಳು ಏನು ?


( 8 ) ನೀವು ನಿಮ್ಮ ವಾರ್ಡಿಗೆ ಹೆಚ್ಚುವರಿ ಬಂದ ಹಣದಲ್ಲಿ ಯಾವ ಕಾಮಗಾರಿ ಕೈಗೊಂಡಿದಿರಿ.


( 9 ) ಈಗ ವಾರ್ಡಿನಲ್ಲಿ ಯಾವ ಕಾಮಗಾರಿ ಕೊನೆಗೊಂಡಿದೆ.


( 10 ) ಕುಡಿಯುವ ನೀರಿನ ಸೌಕರ್ಯ ಇದೆಯೇ?


( 11 ) ಚರಂಡಿಗಳು ಸುಧಾರಿಸಿದೆಯೇ?


( 12 ) ನೀವು ತಿರುಗಾಡುವ ರಸ್ತೆ ಆಗಿದೇಯೇ?


ಹೀಗೆ ಕೇಳಿದ ಪ್ರಶ್ನೆಗೆ ಅವರು ಸರಿಯಾದ ಉತ್ತರ ಕೊಟ್ಟರೆ ಅದರ ದಾಖಲಾತಿ ಪ್ರಕಾರ ಕೆಲಸವನ್ನೂ ಮಾಡಿದ್ದರ  ಎಂದು ಯೋಚಿಸಿ ಮತ್ತು ಪರಿಶೀಲಿಸಿದ ನಂತರ ಮತದಾನ ಮಾಡಿ▪︎


ನಿಮ್ಮ ವಾರ್ಡ್  ನಿಮ್ಮ ಗ್ರಾಮದ ಅಭಿವೃದ್ಧಿ ನಿಮ್ಮ  ಬೆರಳ ತುದಿಯಲ್ಲಿ ಯೋಚಿಸಿ ಮತ ಚಲಾಯಿಸಬೇಕು▪︎


ಚುನಾವಣೆ ಎಂದರೇ ಯಾರೋ ಬಂದು ನಮ್ಮ ವಾರ್ಡ್ ಗಳಲ್ಲಿ ನಟಿಸುವವರು ನಟಿಸುವ ನೃತ್ಯಕ್ಕೆ ಹೆಜ್ಜೆ ಹಾಕಬೇಡಿ ಒಳ್ಳೆಯ ಕೆಲಸಗಾರರನ್ನು ಆಯ್ಕೆ ಮಾಡಿ ಅಥವ ಬೇರೆಯವರಿಗೆ ಅವಕಾಶ ಮಾಡಿಕೊಡಿ▪︎


ತಿಂದು ತೇಗಿ ಜನರ ಸಮಸ್ಯೆಯನ್ನು ಕ್ಯಾರೇ ಮಾಡದ ರಾಜಕಾರಣಿಗೆ ಮತ ಚಲಾಯಿಸಬೇಡಿ▪︎


ಇದು ನಿಮ್ಮ ಕೈಯಲ್ಲಿ ಇದೆ ಉತ್ತಮ ಕೆಲಸಗಾರರನ್ನು ಚುನಾಯಿಸಿ

ಇಲ್ಲಾ ಬೇರೆಯವರಿಗೆ ಅವಕಾಶ ನೀಡಿ••••••••





Comments